ತಮಟೆ ಸದ್ದಿನೊಂದಿಗೆ ಚಾಲನೆಗೊಂಡ ‘ಭಾರತ ಭಾಗ್ಯ ವಿಧಾತ’

ಬೀದರ್ ನಗರದ ನೆಹರೂ ಕ್ರೀಡಾಂಗಣದಲ್ಲಿ ಜರುಗಿದ ‘ಭಾರತ ಭಾಗ್ಯ ವಿಧಾತ’ ಧ್ವನಿ-ಬೆಳಕು ದೃಶ್ಯ ವೈಭವಗಳ ರೂಪಕವನ್ನು ಜಿಲ್ಲಾಧಿಕಾರಿ ಡಾ. ಎಚ್.ಆರ್ ಮಹಾದೇವ ತಮಟೆ ಬಾರಿಸುವುದರ ಮೂಲಕ ಉದ್ಘಾಟಿಸಿದರು. ಶಾಸಕ ರಹೀಮ್ ಖಾನ್, ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಬಿಡಿಎ ಅಧ್ಯಕ್ಷ ಸಂಜಯ ಜಾಗೀರದಾರ್, ನಗರಸಭೆ ಉಪಾಧ್ಯಕ್ಷೆ ಶಾಲಿನಿ ಚಿಂತಾಮಣಿ, ಅನೀಲ ಕುಮಾರ ಬೇಲ್ದಾರ, ಮತ್ತಿತರರು ಸಾವಿರಾರು ಪ್ರೇಕ್ಷಕರು ಸೇರಿದ್ದ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

CM

ಬೀದರ್ ನಲ್ಲಿ ‘ಭಾರತ ಭಾಗ್ಯ ವಿಧಾತ’ದ ಭರ್ಜರಿ ಪ್ರಚಾರ

ಬೀದರ್ ನಲ್ಲಿ ‘ಭಾರತ ಭಾಗ್ಯ ವಿಧಾತ’ ಹಬ್ಬದಂತೆ ಅದ್ಧೂರಿಯಾಗಿ ಜರುಗಿದೆ. ನಗರದ ಜನನಿಬಿಡ ಜಾಗಗಳಲ್ಲಿ ಕಾರ್ಯಕ್ರಮದ ವಿವರ, ಮಾಹಿತಿ ಕುರಿತ ಕಟೌಟ್ ಗಳು ರಾಜಾಜಿಸುತ್ತಿದ್ದವು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಯಕ್ರಮ ವರದಿಗಾರಿಕೆಗೆ ಮಾಧ್ಯಮದವರಿಗೆ ವಾಹನ ಸೌಲಭ್ಯವನ್ನೂ ಕಲ್ಪಿಸಿತ್ತು.

CM

ಕಲಬುರಗಿಯಲ್ಲಿ ಕಂಗೊಳಿಸಿದ ‘ಭಾರತ ಭಾಗ್ಯ ವಿಧಾತ’

ಎಂಭತ್ತು ಕಲಾವಿದರ ತಂಡವದು. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಕಲಾವಿದರ ಆಯ್ಕೆಯಾಗಿದೆ. ಹೊರ ರಾಜ್ಯಗಳ ಕಲಾವಿದರೂ ಉಂಟು ಇವರೆಲ್ಲರೂ ವೇದಿಕೆಯಲ್ಲಿ ಅನಾವರಣಗೊಳಿಸೋದು ‘ಭಾರತ ಭಾಗ್ಯ ವಿಧಾತ’ ಧ್ವನಿ-ಬೆಳಕಿನ ದೃಶ್ಯ ಕಾವ್ಯ.  ಈ ಕಾರ್ಯಕ್ರಮದ ಪರಿಕಲ್ಪನೆ, ನಿರ್ದೇಶನ, ಸಂಗೀತ, ಕಲಾ ಪ್ರಕಾರಗಳು, ವಸ್ತ್ರವಿನ್ಯಾಸ, ನೃತ್ಯ ಸಂಯೋಜನೆ ಜನ ಮನಗೆದ್ದಿವೆ.

CM

ಶೋಷಿತ ವರ್ಗಕ್ಕೆ ನ್ಯಾಯ ನೀಡಿದ ಮಹಾನ್ ಪುರುಷ ಡಾ.ಬಿ.ಆರ್.ಅಂಬೇಡ್ಕರ್:ಸಚಿವ ಡಾ.ಶರಣ ಪ್ರಕಾಶ ಪಾಟೀಲ್

ಶತ ಶತಮಾನಗಳಿಂದ ತುಳಿತಕೊಳಗಾದ ಶೋಷಿತ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಟ್ಟ ಮಹಾನ್ ಪುರುಷ ಡಾ.ಬಿ.ಆರ್.ಅಂಬೇಡ್ಕರ್ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

ಕಲಬುರ್ಗಿ ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜಯಂತ್ಯೋತ್ಸವ ಅಂಗವಾಗಿ ಆಯೋಜಿಸಲಾದ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಚರಿತ್ರೆಯ ” ಭಾರತ ಭಾಗ್ಯ ವಿಧಾತ” ಧ್ವನಿ-ಬೆಳಕು ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ವಿವಿಧ ಪ್ರಾಂತ, ಭಾಷೆ, ಅಸಂಖ್ಯಾತ ಜಾತಿಗಳು ಹೊಂದಿದ್ದರೂ ಭಾರತವು ವೈವಿಧ್ಯತೆಯಲ್ಲಿ ಏಕತೆ ಹೊಂದಿದೆ. ಇದಕ್ಕೆ ಕಾರಣ ಯಾವುದೇ ಧರ್ಮಕ್ಕೆ ಧಕ್ಕೆ ಬಾರದಂತೆ ವಿಶ್ವಕ್ಕೆ ಮಾದರಿಯಾದ ಎಲ್ಲ ವರ್ಗವು ಒಪ್ಪುವ ಸಂವಿಧಾನವನ್ನು ಭಾರತಕ್ಕೆ ಸಮರ್ಪಿಸಿದ್ದು ಭಾರತಕ್ಕೆ ಭದ್ರ ಬುನಾದಿಯಾಗಿದೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಸೇರಿದಂತೆ ಧ್ವನಿಯಿಲ್ಲದವರಿಗೆ ಧ್ವನಿಯಾಗಿ ಎಲ್ಲರಿಗೂ ಸಮಾನ ಹಕ್ಕು ನೀಡಿದವರು ಬಾಬಾ ಸಾಹೇಬರು. ಇಂತಹ ಮಹಾಪುರುಷನ ಬದುಕು ಇಂದಿನ ಪೀಳಿಗೆಗೆ ಪ್ರಸ್ತುತಪಡಿಸುವ ‘ಭಾರತ ಭಾಗ್ಯ ವಿಧಾತ’ ಕಾರ್ಯಕ್ರಮ ವಾರ್ತಾ ಇಲಾಖೆ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಭಾಗವನ್, ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್, ಪ್ರೊಬೇಷನರಿ ಐ.ಎ.ಎಸ್.ಅಧಿಕಾರಿ ಲಕ್ಷ್ಮೀ ನಾರಾಯಣ ಉಪಸ್ಥಿತರಿದ್ದರು.

CM

ಕಲಬುರಗಿಯಲ್ಲಿ ‘ಭಾರತ ಭಾಗ್ಯ ವಿಧಾತ’ ಕಾರ್ಯಕ್ರಮಕ್ಕೆ ಚಾಲನೆ

ಡಾ.ಬಿ.ಆರ್.ಅಂಬೇಡ್ಕರ್ ಜೀವನ ಚರಿತ್ರೆಯ ” ಭಾರತ ಭಾಗ್ಯ ವಿಧಾತ” ಧ್ವನಿ-ಬೆಳಕು ಕಾರ್ಯಕ್ರಮಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.
ಕಲಬುರಗಿ ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಭಾಗವನ್, ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್, ಪ್ರೊಬೇಷನರಿ ಐ.ಎ.ಎಸ್.ಅಧಿಕಾರಿ ಲಕ್ಷ್ಮೀ ನಾರಾಯಣ ಉಪಸ್ಥಿತರಿದ್ದರು.

CM

ಕಲಬುರಗಿಯಲ್ಲಿ ಧ್ವನಿ-ಬೆಳಕು ಕಾರ್ಯಕ್ರಮದ ವೇದಿಕೆ ಸಿದ್ಧತೆ ಕ್ಷಣಗಳು

ಕಲಬುರ್ಗಿಯಲ್ಲಿ ನಡೆದ ‘ಭಾರತ ಭಾಗ್ಯ ವಿಧಾತ’ ಧ್ವನಿ-ಬೆಳಕು ಕಾರ್ಯಕ್ರಮದ ವೇದಿಕೆ ಸಿದ್ಧತೆಯ ಫೋಟೋಗಳು ಇಲ್ಲಿವೆ.

CM

ವಚನಕಾರರ ನಾಡಲ್ಲಿ ಧ್ವನಿ-ಬೆಳಕಿನ ಐಭೋಗ

ಜವಾರಿ ನಾಡು ವಿಜಯಪುರದಲ್ಲಿ ಪ್ರದರ್ಶನಗೊಂಡ ‘ಭಾರತ ಭಾಗ್ಯ ವಿಧಾತ’ ಧ್ವನಿ-ಬೆಳಕು ಕಾರ್ಯಕ್ರಮ ಜನಮಾನಸದಲ್ಲಿ ಗೆಲುವು ದಾಖಲಿಸಿದೆ. ಒಬ್ಬರೇ ಬಂದು ವೀಕ್ಷಿಸಿದ ಪ್ರೇಕ್ಷಕರು ತಮ್ಮ ಕುಂಟುಂಬದವರನ್ನೂ ಕರೆತರಬೇಕಿತ್ತು, ಒಂದೊಳ್ಳೇ ಪ್ರೋಗ್ರಾಂನ್ನು ಅವರು ಮಿಸ್ ಮಾಡ್ಕೊಂಡ್ರಲ್ಲಾ ಅಂದ್ಕೊಂಡೋರೂ ಉಂಟು. ಅದ್ಭುತ ದೃಶ್ಯಕಾವ್ಯದ ವೈಭವಕ್ಕೆ ಮನಸೋತರು. ಕಲಾವಿದರು, ತಾಂತ್ರಿಕ ತಂಡದವರು, ಒಟ್ಟಾರೆ ತಂಡದ ಪ್ರತಿ ಸದಸ್ಯರನ್ನೂ ಕೊಂಡಾಡದರು.

CM